ಇದ್ಯಾವ ಆಡಳಿತ.. ಹಂತ ಹಂತವಾಗಿ ಮನುಷ್ಯರನ್ನು ಕೊಲ್ಲುವುದೇ ನಿಮ್ಮ ಆಡಳಿತವಾ?
ಪೆಟ್ರೋಲ್ ಬೆಲೆ ಏರಿಕೆ. ಅಡುಗೆ ಅನಿಲದ ಬೆಲೆ ಏರಿಕೆಯ ಸುದ್ಧಿ.......
ಮನುಷ್ಯರನ್ನು ಹಂತ ಹಂತವಾಗಿ ಮಾನಸಿಕವಾಗಿ ಕೊಲ್ಲುವಂತಹ ಕೆಲಸ ಮಾಡುತ್ತಿದ್ದಾರೆ ನಮ್ಮನ್ನು ಆಳುತ್ತಿರುವ ದೊರೆಗಳು.
ಕೆಳ ವರ್ಗದ, ಮಧ್ಯಮ ವರ್ಗದ ಜೀವನದ ನಿರ್ವಹಣೆ ಎಷ್ಟು ದುಬಾರಿಯಾಗುತ್ತಿದೆ. ದಿನದಿಂದ ದಿನಕ್ಕೆ ಏರುತ್ತಲೇ ಇದೆ.
ಖರ್ಚಿನ ವೆಚ್ಚ.
ಪೈಪೋಟಿಯ ಜಗತ್ತು. ಒಬ್ಬರನ್ನು ನೋಡಿ ಮತ್ತೊಬ್ಬರು, ಅವರಂತೆ ನಾವಾಗಬೇಕು. ಅದಕ್ಕೆ ಹಣ ಬೇಕು. ದುಡಿಮೆಯ ದಾರಿ ಒಂದೇ ಆದರೆ ಖರ್ಚು ದುಬಾರಿಯಾಗುತ್ತಿದೆ.ನಾವುಗಳು ಮತ ಹಾಕಿ ಆರಿಸಿ, ಕಳುಹಿಸಿ ಅಧಿಕಾರದ ಗದ್ದುಗೆಯ ಮೇಲೆ ಕೂರಿಸಿದಕ್ಕೆ ನಮ್ಮ ದೊರೆಗಳು ನಮಗೆ ಕೊಡುತ್ತಿರುವ ಕೊಡುಗೆಗಳು ಇವು. ಐಶಾರಾಮಿ ಜೀವನ ನಡೆಸುತ್ತಿರುವ ಆ ನಮ್ಮ ದೊರೆಗಳಿಗೆ ಜನರ ಕಷ್ಟಗಳ ಬಗ್ಗೆ ಅರಿವಿದೆಯೇ ?
ಖಂಡಿತ ಇಲ್ಲ. ಇವರನ್ನು ಹಾಗೆ ಇರುವಂತೆ ಮಾಡಿದವರೂ ನಾವುಗಳೇ ಅದಕ್ಕೆ ನಾವೇ ಈ ಬವಣೆಗಳನ್ನು ಅನುಭವಿಸುತ್ತಿದ್ದೇವೆ.
ಅಪರಾಧಗಳು ಹೆಚ್ಚಾಗುತ್ತಿವೆ. ಅನೈತಿಕತೆ, ವೇಶ್ಯಾವಾಟಿಕೆ, ದ್ರೋಹ, ಮೋಸ ಹೆಚ್ಚಾಗುತ್ತಿವೆ. ಇವುಗಳಿಗೆ ಕಾರಣ ದುಬಾರಿ ಜೀವನ ವೆಚ್ಚಗಳು.
ಸರಕಾರಿ ಕೆಲಸದಲ್ಲಿರುವವರು ಹೇಗೋ ನಮ್ಮ ತೆರಿಗೆ ಹಣದಿಂದಲೇ ಭತ್ಯೆಗಳನ್ನು ಏರಿಸಿಕೊಂಡು ಸರಿದೂಗಿಸುತ್ತಾರೆ. ಬೇರೆ ಜನರು ಏನು ಮಾಡಬೇಕು? ಅಡ್ಡದಾರಿಗೆ ಇಳಿಯಬೇಕು.
ಪ್ರಳಯ ಎಂಬುದು ಮುಂದೆ ಆಗಬೇಕಿಲ್ಲ. ದಿನೇ ದಿನೇ ಆಗುತ್ತಿದೆ. ರಾಜರೇ ಕಳ್ಳರಾಗುತ್ತಿದ್ದಾರೆ.
ಇದರಿಂದ ಕಷ್ಟ ಅನುಭವಿಸುತ್ತಿರುವವರು ನಾವುಗಳು.
ಬೆಲೆ ಏರಿಸಿದಾಗ ಒಂದಷ್ಟು ಪ್ರತಿಭಟನೆಗಳು, ಒಂದಷ್ಟು ಹೇಳಿಕೆಗಳು ನಂತರ ಎಲ್ಲವನ್ನು ಮರೆತು ಬಿಟ್ಟು ಮತ್ತೆ ಮುಂದಿನ ಬೆಲೆ ಏರಿಕೆ ಬಂದಾಗ ಮತ್ತದೇ ಧ್ವನಿ. ಇದನ್ನೆಲ್ಲಾ ನಮ್ಮ ದೊರೆಗಳು ಅರಿತಿದ್ದಾರೆ. ಅದಕ್ಕೆ ಅವರಿಗೆ ಮನೋಸೋಇಚ್ಚೆ ಅಧಿಕಾರ ನಡೆಸುತ್ತಾರೆ. ತಪ್ಪು ನಮ್ಮದೇ.
ಒಳ್ಳೆಯದನ್ನು ನಾವು ಮನುಷ್ಯರು ಯೋಚಿಸುವುದಿಲ್ಲ. ಅಪಾಯ ಮುಂದೆ ಬರುತ್ತದೆ ಎಂದು ಅನ್ನಿಸಿದಾಗ "ಪ್ರಾಣಿಗಳೇ ಎಚ್ಚೆತ್ತುಕೊಳ್ಳುತ್ತವೆ" ನಾವು ಬುದ್ಧಿ ಜೀವಿಗಳು ಅದರ ಬಗ್ಗೆ ಯೋಚಿಸುವುದಿಲ್ಲ.
ನಮ್ಮ ದೇಶದ ಅಂಗಗಳನ್ನು ನಮ್ಮನ್ನಾಳುವ ದೊರೆಗಳು ತಮ್ಮ ಸ್ವಾರ್ಥಕ್ಕೆ ಭ್ರಷ್ಟಚಾರದ ಕೂಪವನ್ನಾಗಿಸಿದ್ದಾರೆ. ಇನ್ನುಳಿದ ಒಂದು ಅಂಗ "ಪತ್ರಿಕೋದ್ಯಮ" ಅದು ಸಹ ತನ್ನ ಮೌಲ್ಯತೆ ಕಳೆದುಕೊಳ್ಳುತ್ತಿದೆ. ಎಲ್ಲಿದೆ ನಮಗೆ ದಾರಿ. ಇವರುಗಳ ಮಧ್ಯೆ ಜೀವಿಸುತ್ತಿದ್ದೇವೆ ನಾವುಗಳು.
ಪೆಟ್ರೋಲ್ ಬೆಲೆ 3.24 ಪೈಸೆ ಏರಿಸುತ್ತಾರೆ. ನಾಳೆ ಡಿಸೇಲ್ ಬೆಲೆ.....? ಅಡುಗೆ ಅನಿಲ 425-00 ರಿಂದ 750-00 ಕ್ಕೆ ಏರಿಸುವ ಪ್ರಸ್ತಾವನೆ ದೊರೆಗಳ ಮುಂದಿದೆಯಂತೆ. ... ಹೀಗೇ ಏರಿಸುತ್ತಾ ಹೋದಂತೆ ಹಾಳಾಗುವುದು ಜನರ
ಮಾನಸಿಕ ಸ್ವಾಸ್ಥ.
ಆಡಳಿತ ನಡೆಸುವವರಿಗೇನು.
ಜನರ ತೆರಿಗೆ ಹಣದಿಂದ ಕಾರು, ಬಂಗಲೆಯ ಜೊತೆಗೆ ಮೂರು ತಲೆ ಮಾರಿಗಾಗುವಷ್ಟು ಮಾಡಿಕೊಂಡು ರಾಜರಂತೆ ಇದ್ದಾರೆ.
ಈಗಲಾದರೂ ಎಚ್ಚೆತ್ತುಕೊಳ್ಳಿ ಗೆಳೆಯರೇ, ನಿಮ್ಮದೇ ಆದ ರೀತಿಯಲ್ಲಿ ಪ್ರತಿಭಟಿಸಿ. ಮುಂದೆ ಅಪಾಯ ಕಾದಿದೆ.
ಮನುಷ್ಯರು ಒಬ್ಬರನ್ನೊಬ್ಬರು ಕಿತ್ತು ತಿನ್ನುವ ಸ್ಥಿತಿ ನಿರ್ಮಾಣ ವಾಗುವ ಲಕ್ಷಣಗಳಿವೆ. ಆ ಸ್ಥಿತಿಯನ್ನು ನಮ್ಮ ದೊರೆಗಳು ಮಾಡಲು ಹೆಚ್ಚು ದಿನಗಳು ಬೇಕಾಗಿಲ್ಲ.
ಜಿಂಬಾವ್ವೆ, ಕೀನ್ಯಾ, ಉಗಾಂಡ ದೇಶದ ಸ್ಥಿತಿಗಳು ನಮ್ಮ ಕಣ್ಣ ಮುಂದೆ ಉದಾಹರಣೆಗಳು ಇವೆ.
ರಾಜುವಿನಯ್ ದಾವಣಗೆರೆ
No comments:
Post a Comment